Posts

Ganesha chaturthi facts in kannada

Image
  ಗಣೇಶ ಓಂ ಗಣೇಶಾಯ ನಮಃ ಗಣೇಶ ಅನೇಕ ಹಿಂದೂಗಳ ಆರಾಧ್ಯ ದೈವ. ಮಾತೆ ಪಾರ್ವತಿ ಹಾಗೆ ಮಹಾದೇವರ ಮಗ. ಗಣೇಶನಿಗೆ ಏಕದಂಥ, ವಕ್ರತುಂಡ, ವಿನಾಯಕ, ಕರಿಮುಖ, ವಿಗ್ನವಿನಾಶಕ ಈ ರೀತಿಯ ಹಲವಾರು ಹೆಸರುಗಳಿವೆ. ಗಣೇಶನ ಬಗ್ಗೆ ಹಲವಾರು ಪುರಾಣಗಳಲ್ಲಿ ಉಲ್ಲೇಖಗಳಿವೆ. ಅದರಲ್ಲಿ ಮುಖ್ಯವಾಗಿ ಗಣೇಶ ಪುರಾಣ, ಮುದ್ಗಲ ಪುರಾಣ, ಬ್ರಹ್ಮ ಪುರಾಣ , ಇವರನ್ನ ಕರಿಮುಖ ಅಂತಲೂ ಕರೀತಾರೆ.  ಗಣೇಶ ಚತುರ್ಥಿ ಹಿಂದಿನ ಕಥೆ  ಮಹಾದೇವರು ತಪಸ್ಸಿಗೆ ಹೋಗಿರುವಾಗ ಒಂದುದಿನ ಪಾರ್ವತಿಯು ಮಣ್ಣಿನಿಂದ ಒಂದು ಮಗುವಿನ ಗೊಂಬೆಯನ್ನು ಮಾಡತ್ತಾರೆ ಹಾಗೆ ಆ ಗೊಂಬೆಗೆ ಜೀವವನ್ನು ಕೊಡುತ್ತಾರೆ. ನಂತರ ಅವರು ಸ್ನಾನಕ್ಕೆಂದು ಹೊರಡುವ ಸಮಯದಲ್ಲಿ ಆ ಬಾಲಕನಿಗೆ ಕರೆದು ನಾನು ಸ್ನಾನಕ್ಕೆ ಹೋಗುತ್ತಿದ್ದೇನೆ ಯಾರನ್ನು ಒಳಗೆ ಬಿಡಬೇಡ ಎಂದು ಹೇಳಿ ಹೋಗುತ್ತಾರೆ. ಅದೇ ಸಮಯಕ್ಕೆ ಮಹಾದೇವರು ತಮ್ಮ ತಪಸ್ಸು ಮುಗಿಸಿ ಮರಳಿ ಬರುತ್ತಾರೆ ಆಗ ಅವರಿಗೆ ಬಾಲಕ ಎದುರಾಗಿತ್ತಾನೆ ಹಾಗೂ ಮಹದೇವರನ್ನು ತಡೆದು ನಿಲ್ಲಿಸುತ್ತಾನೆ. ಮಹಾದೇವರು ಏನು ಹೇಳಿದರು ಒಳಗೆ ಬಿಡುವುದಿಲ್ಲ. ಮೊದಲೇ ಆಯಾಸಗೊಂಡಿದ್ದ ಮಹಾದೇವರು ಕೋಪಗೊಂಡು ತಮ್ಮ ತ್ರಿಶೂಲದಿಂದ ಆ ಬಾಲಕನ ರುಂಡ ಹಾಗೂ ಮುಂಡಗಳನ್ನು ಛೇದಿಸುತ್ತಾರೆ. ಆಗ ಪಾರ್ವತಿಯು ಸ್ನಾನವನ್ನು ಮುಗಿಸಿಕೊಂಡು ಹೊರಗೆ ಬಂದು ನೋಡಿದಾಗ ರುಂಡ ಹಾಗೂ ಮುಂಡ ಬೇರ್ಪಟ್ಟ ದೇಹವನ್ನು ನೋಡಿ ದುಃಖಿಸುತ್ತಾರೆ ಹಾಗೂ ನಡೆದ ಎಲ್ಲಾ ವಿಚಾರವನ್ನು ಹೇಳುತ್ತಾರೆ. ಪಾರ್ವತಿಯ ...