Marijuana plants or ganja information in kannada
ಗಾಂಜಾ ಭಾರತದಲ್ಲಿ ನಿಷೇದಿಸಿರುವ ಒಂದು ಪದಾರ್ಥ. ಈಗ ಮೊನ್ನೆ ತಾನೆ ಬೆಂಗಳೂರಿನಲ್ಲಿ ಸುಮಾರು 204 ಕೆ.ಜಿ ಯಷ್ಟು ಗಾಂಜಾವನ್ನು ಪೋಲಿಸರು ಹಿಡಿದಿದ್ದಾರೆ. ಇದರ ನಂಟು ಈಗ ಕನ್ನಡ ಚಿತ್ರರಂಗಕ್ಕೂ ತಟ್ಟಿದೆ. ಈಗ ಮೀಡಿಯಾದವರಿಗೂ ತನ್ನ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ಈ ಸುದ್ದಿ ಸಹಾಯವಾಗಿದೆ. ಹಾಗಾದರೆ ಈ ಗಾಂಜಾ ಯೆಂದರೆ ಏನು? ಇದನ್ನು ಏಕೆ ಭಾರತದಲ್ಲಿ ನಿಷೇದಿಸಿದ್ದಾರೆ?ಯೆಂದು ಸ್ವಲ್ಪ ಮಾಹಿತಿ ತಳಿದುಕೊಳ್ಳೋಣ. ಏನಿದು ಗಾಂಜಾ ? ಗಾಂಜಾ ಇದನ್ನುಭಂಗಿ ಸೊಪ್ಪು ಅಥವಾ ಮಾರಿಜೋವಾನ ಅಂತಲೂ ಕರೆಯುತ್ತಾರೆ. ( Cannabis sativa ) ಕನ್ನಾಬಿಸ್ ಸಟ್ಯಿವ ಇದು ಒಂದು ಗಾಂಜಾ ಸಸ್ಯ ಪ್ರಭೇದ, ಇದು ಒಂದು ಮೂಲಿಕೆ ಜಾತಿಯ ಹೂ ಬಿಡುವ ಸಸ್ಯ. ಈ ಸಸ್ಯ ಪ್ರಭೇದ ಪೂರ್ವ ಏಷ್ಯಾ ದೇಶಗಳಲ್ಲಿ ಕಾಣಬಹುದಾಗಿದೆ, ಹಾಗೆ ಅಫ್ಘಾನಿಸ್ತಾನ , ಕೆನಡಾ , ಚೀನಾ , ಕೊಲಂಬಿಯಾ , ಭಾರತ , ಜಮೈಕಾ , ಲೆಬನಾನ್ , ಮೆಕ್ಸಿಕೊ , ಮೊರಾಕೊ , ನೆದರ್ಲ್ಯಾಂಡ್ಸ್ , ಪಾಕಿಸ್ತಾನ , ಪರಾಗ್ವೆ , ಸ್ಪೇನ್ , ಥೈಲ್ಯಾಂಡ್ , ಟರ್ಕಿ , ಯುನೈಟೆಡ್ ಕಿಂಗ್ ಡಮ್ , ಯುನೈಟೆಡ್ ಸ್ಟೇಟ್ಸ್ ದೇಶಗಳಲ್ಲೂ ಬೆಳೆಯುತ್ತಾರೆ. ಇದನ್ನು ಕೈಗಾರಿಕಾ ನಾರು , ಬೀಜದ ಎಣ್ಣೆ , ಆಹಾರ , ಧಾರ್ಮಿಕ , ಆಧ್ಯಾತ್ಮಿಕ ಮನಸ್ಥಿತಿಗಳು ಮತ್ತು ಪ್ರಾಥಮಿಕವಾಗಿ ವೈದ್ಯಕೀಯ ಅಥವಾ ಮನರಂಜನಾ ಉದ್ದೇಶಗಳಿಗಾಗಿ ಬಳಸುತ್ತಾರೆ. ಗಾಂಜಾ ಸಸ...