ಪ್ರಕೃತಿ ಕಳಿಸಿದ ಜೀವನ ಧರ್ಮ
ಮೊದಲಿಗೆ ಎಲ್ಲರಿಗೂ 2021 ಹೊಸ ವರ್ಷದ ಹಾರ್ಧಿಕ ಶುಭಾಶಯಗಳು
ಹೋದ ವರ್ಷ ಅಂದರೆ 2020 ಬುದುವಾರದಂದು ಶುರುವಾಯಿತು ಆದ್ರೆ ಯಾರು ಊಹಿಸಿರಲಿಲ್ಲ ಈ ಬುದುವಾರ ಹಲವಾರು ಜನರ ಆಸೆ ಆಕಾಂಕ್ಷೆಗಳನ್ನು ಬೂದಿ ಮಾಡುವುದೆಂದು. 2019ರಲ್ಲಿ ಕೆಂಪು ರಾಷ್ಟ್ರ ಚೀನಾದ ವುಹಾನ್ ನಗರದಲ್ಲಿ ಹುಟ್ಟಿದ ವೈರಸ್ ಒಂದು ಸದ್ದಿಲ್ಲದೇ ಇಡೀ ಪ್ರಪಂಚವನ್ನೇ ಆಕ್ರಮಿಸ ತೊಡಗಿತು. ಅದು ಭಾರತಕ್ಕೂ ಸಹಾ ಹರಡಿತು, ಅದರ ಕ್ರೋರ್ಯತೆ ತಿಳಿಯುವಷ್ಟರಲ್ಲಿ ಲಕ್ಷ ಲಕ್ಷ ಜನರ ಪ್ರಾಣವನ್ನು ತೇಗಿಯಿತು. 8 ನವೆಂಬರ್ 2016 ರಂದು ರಾತ್ರಿ 8 ಗಂಟೆಗೆ ನಮ್ಮ ಪ್ರಧಾನಿ ಮೋದಿಜಿ ಅವರು ನೋಟು ಅಮಾನ್ಯಗೊಳಿಸಿ ಭಾರತದ ಪ್ರಜೆಗಳಿಗೆ ಒಂದು ದೊಡ್ಡ ಶಾಕ್ ಕೊಟ್ಟಿದ್ದರು, ಆದರೆ ಮಾರ್ಚ್ 22, 2020 ರಂದು ಲೊಕ್ಡೌನ್ ಹೇರುವುದರ ಮೂಲಕ ಯಾರೂ ವುಹಿಸದ ಶಾಕ್ ಕೊಟ್ಟರು.ಈ ಲೊಕ್ಡೌನ್ ಮೂಲಕ ಹಲವಾರು ಜನರ ಜೀವನ ಶೈಲಿಯೇ ಬದಲಾಗಿ ಹೋಯಿತು. ದೊಡ್ಡ ದೊಡ್ಡ ಶ್ರೀಮಂತರು ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಿದ್ದರೆ ಕೆಲವರು ಇದರ ದುರುಪಯೋಗವೊ ಅಥವಾ ಸದುಪಯೋಗವನ್ನೋ ಪಡೆದುಕೊಂಡು ಶ್ರೀಮಂತರಾದರು. ಹಲವಾರು ಜನ ತಮ್ಮ ಕೆಲಸ ಕಳೆದುಕೊಂಡರು ಇನ್ನ ಹಲವಾರು ಜನ ಒತ್ತಡದ ಕೆಲಸಗಳಿಂದ ಮುಕ್ತರಾಗಿ ತಮ್ಮ ಹತ್ತಿರದವರ ಜೊತೆ ಹೆಂಡತಿ ಮಕ್ಕಳ ಜೊತೆ, ಹಲವಾರು ದಿನಗಳಿಂದ ದೂರವಿದ್ದ ತಮ್ಮ ತಂದೆ ತಾಯಿಯ ಜೊತೆ ಕಾಲ ಕಳೆಯಲು ಸಹಾಯ ವಾಯಿತು. ಹಾಗೆ ಈ ಸಮಯದಲ್ಲಿ ಯಾರು ಮಿತ್ರರು ಯಾರು ಶತ್ರುಗಳು ಎಂದು ತಿಳಿಯಲು ಸಹಾಯ ವಾಯಿತು. ಒಟ್ಟಿನಲ್ಲಿ ಜನರಿಗೆ ಜೀವನದ ನಿಜವಾದ ಅರ್ಥ ಯೇನೆಂಬುದನ್ನು ಆ ದೇವರು ಈ ಪ್ರಕೃತಿಯ ಮೂಲಕ ತಿಳಿಸಿಕೊಟ್ಟರು ಎಂಬುದು ನನ್ನ ಅಭಿಪ್ರಾಯ.ಆದರೆ ಇದು ಕೋರೋನಾದ ಒಂದು ಮುಖವಾದರೇ ಇನ್ನೊಂದು ಕರಾಳ ಮುಖದಬಗ್ಗೆ ಹೇಳಲೇಬೇಕು, ಅದೇನೆಂದರೆ ಕೋರೋನಾದ ಹೆಸರಿನಲ್ಲಿ ದೊಡ್ಡ ದೊಡ್ಡ ಔಷಧ ಕಪನಿಗಳು ನಮ್ಮ ಔಷಧಿ ಗಳನ್ನು ಬಳಸಿ ಎಂದು ಅಧಿಕಾರಿಗಳ ಜೊತೆ ಲಾಬಿ ಮಾಡಲು ನಿಂತರು, ಹಲವಾರು ಆಸ್ಪತ್ರೆಗಳು ಜನರಿಗೆ ಸಹಾಯ ಅಥವಾ ಚಿಕಿತ್ಸೆ ಹೆಸರಿನಲ್ಲಿ ಜನರಿಂದ ಹೆಚ್ಚಿನ ಹಣ ಸುಲಿಗೆ ಮಾಡಿದವು. ಟಿವಿ ಚಾನಲ್ ಗಳು "ಕೋರೋನಾ ರುದ್ರನರತನ", "ನರಭಕ್ಷಕ ಕೋರೋನಾ" ಅಂತ ಹೇಳಿ ಜನರಲ್ಲಿ ಭೀತಿ ಹುಟ್ಟಿಸಿದರು, ಜನರು ಮಾನಸಿಕವಾಗಿ ಕುಂದುವಂತೆ ಮಾಡಿದರು.
ಆದ್ದರಿಂದ ಸರ್ಕಾರಗಳು ಈಗಲಾದರೂ ಈ ರೀತಿಯ ಅಕ್ರಮಗಳಿಗೆ ಲಗಾಮು ಹಾಕಿ ಈ ಹೊಸ ವರ್ಷದಲ್ಲಿಯಾದರು ಜನರು ಮಾನಸಿಕವಾಗಿ ನೆಮ್ಮದಿಯಾಗಿ ಇರುವಂತೆ ನೋಡಿಕೊಳ್ಳಿ ಎನ್ನುವುದೇ ನನ್ನ ಅಭಿಪ್ರಾಯ

Comments
Post a Comment